ನಾವು ಜಸ್ಟ್ ಅವರ ಕಾಮಕ್ಕೆ ಹುಟ್ಟಿದವರಲ್ಲ!

ಅವರ ಕೆನ್ನೆಗೆ ಎತ್ತಿ ಬಾರಿಸಿದಂತೆ ‘ನನ್ನ ಹುಟ್ಸು ಅಂತ ನಾ ನಿಮಗೆ ಕೇಳಿಕೊಂಡಿದ್ನಾ?’ ಅಂದು ಬಿಡುತ್ತೇವೆ. how cruel we are! ಅವರ ಅಷ್ಟು ದಿನದ ಎಣಿಕೆಗಳನ್ನು, ಶ್ರಮಗಳನ್ನು ಜಸ್ಟ್ ಒಂದು ಮಾತಲ್ಲಿ ಜಾಡಿಸಿ ಒದ್ದಿರುತ್ತೇವೆ. ಅದು ಮನುಷ್ಯತ್ವವನ್ನು ಸಾಯಿಸಿಕೊಂಡವನ ಅಬ್ಬರ! ಇನ್ನೂ ಮುಂದುವರೆದು ‘ನನ್ನ ಹುಟ್ಟಿನಿಂದಲೇ ನೀವು ತಂದೆ, ತಾಯಿ ಅನ್ನಿಸಿಕೊಂಡಿರಿ’ ಅನ್ನುತ್ತಾನೆ.


ಒಂದಲ್ಲ ಒಂದ್ಸರಿ, ಮಕ್ಕಳು ಅನ್ನಿಸಿಕೊಂಡವರು ತಂದೆ ತಾಯಿಗಳ ಮೇಲೆ ಈ ಪರಿ ಎಗರಿಬಿಟ್ಟಿರುತ್ತಾರೆ. ಯಾಕೋ ಗೊತ್ತಿಲ್ಲ ಒಂದು ಹಂತದಲ್ಲಿ ಮಕ್ಕಳು ಮತ್ತು ತಂದೆ ತಾಯಿಗಳ ಮಧ್ಯೆ ಈ ತರಹದೊಂದು ಮಾತುಕತೆ ನಡೆದಿರುತ್ತದೆ. ಹಿಂದು ಮುಂದಾದ ಪೀಳಿಗೆ, ಅಭಿರುಚಿಗಳು, ಮಗು ಸಾಗುವ ದಾರಿ, ತಂದೆ ತಾಯಿಗಳ ಒಂದಿಷ್ಟು ಬಿಗಿ ಹಿಡಿತ ಎಲ್ಲವೂ ಸೇರಿ ಈ ಮಟ್ಟಿನ ತಿರುಗು ಬೀಳುವಿಕೆ ನಡೆದಿರುತ್ತದೆ.


ಮಕ್ಕಳು ಅನ್ನಿಸಿಕೊಂಡವರ ಬಳಿ ನನ್ನದೊಂದು ಮಾತಿದೆ! ನಾನೂ ಕೂಡ ಮಗನಾಗಿದ್ದವನು, ಅಪ್ಪನಾಗಿದವನು. ಎರಡೂ ಪ್ಲೇಸ್‍ಗಳಲ್ಲಿ ಕೂತು ಬದುಕು ಉಂಡುವನು. ಮಕ್ಕಳನೆಸಿಕೊಂಡ ಮಕ್ಕಳೇ ನೀವು ನಿಮ್ಮ ತಂದೆ ತಾಯಿಯರ ಕೇವಲ ಕಾಮದ ತೆವಲಿನ ಫಲ ಎಂಬುದನ್ನು ಎಂದಾದರೂ ಯೋಚಿಸಿದಿರೇನೋ!? ಒಂದು ಹುಡುಗಿ ಹೆಣ್ಣಾಗಿ ತಾಯಿಯಾಗುವ ಯಾತ್ರೆಯಲ್ಲಿನ ಅವಳೊಂದಿಗೆ ಇಂಚಿಂಚು ಚಿಗಿತುಕೊಂಡು ಬಂದಿರುವ, ಮುಂದೆ ಬರಲಿರುವ ಸಂತಾನದ ಬಗೆಗೆ ಅವಳ ಮನೋಯಾತ್ರೆಯನ್ನು ಗಮನಿಸಿಕೊಂಡಿರೇನೋ? ಅವಳ ಬದುಕಿನ ಬೃಹತ್ತಾದ ಮತ್ತು ಅವಳು ತನ್ನನ್ನೇ ತಾನು ಬಸಿದುಕೊಂಡು ಮಾಡುವ ಕಾರ್ಯಗಳೆಂದರೆ ಒಂದು ಮದುವೆ ಇನ್ನೊಂದು ನೀವು. ಮದುವೆಯ ಮಾತಿನ ಆರಂಭದ ದಿನದಿಂದಲೇ ಆಕೆ ನಿಮ್ಮ ಕನಸು ಕಂಡಿರುತ್ತಾಳೆ. ನಿಮಗೊಂದು ಉಜ್ವಲ ಭವಿಷ್ಯಕ್ಕೆ ಕುಲಾವಿ ಎಣಿಯಲು ಕಡ್ಡಿ ಎತ್ತಿಡುತ್ತಾಳೆ.


‘ಮದುವೆ’ ಅನ್ನೋದು ಮುಗಿದ ಕೂಡಲೇ ನಿಮ್ಮ ಆಗಮನಕ್ಕೆ ದೇಹ ಹೊಂದಿಸಿಕೊಳ್ಳುತ್ತಾಳೆ. ಒಂದಿಷ್ಟು ತಡವಾದರೆ ಸಾಕು ನಾಲ್ಕು ಜನರ ಮಾತಿಗೆ ಆಹಾರವಾಗುತ್ತಾಳೆ. ಅದೆಷ್ಟು ದೇವರ ಗುಡಿಗಳ ಮೆಟ್ಟಿಲುಗಳನ್ನು ಸವೆಸಿರುತ್ತಾಳೆ. ಅವೆಲ್ಲದರ ಮಧ್ಯೆ ನೀವು ತಣ್ಣಗೆ ಬಂದು ಹೊಟ್ಟೆಯಲ್ಲಿ ಕೂತು ಬಿಟ್ಟರೆ ಸಾಕು ಅಂದಿನಿಂದಲೇ ಅದೆಷ್ಟು ಕೇರ್ ಮಾಡುತ್ತಾ ಬೆಳೆಸುತ್ತಾಳೆ. ನೀನು ಚಂದವಾಗಿಯೇ ಭೂಮಿಗೆ ಬರಲೆಂದು ಆಸ್ಪತ್ರೆಗಳು ಸುರಿಯುವ ಔಷಧಿ ಮಾತ್ರಗಳನ್ನು ಮುಕ್ಕುತ್ತಾಳೆ. ಗುಡಿಗಳನ್ನು ಸುತ್ತುತ್ತಾಳೆ. ಮೂಳೆಯೇ ಮುರಿದು ಹೋಗುವಂತ ನೋವಲ್ಲೂ ನಿನ್ನ ಬರುವಿಕೆಯ ಅಳು ಕೇಳಿಸಿಕೊಂಡು ನಗುತ್ತಾಳೆ. ಅವೆಷ್ಟೋ ವರ್ಷಗ¼ ಕಾಲÀ ನಿದ್ದೆಯನ್ನು ಅಡವಿಟ್ಟು ಬೆಳೆಸುತ್ತಾಳೆ. ತಾನು ಬದುಕಿರುವವರೆಗೂ ಬೆಳೆಸುತ್ತಲೇ ಇರುತ್ತಾಳೆ.
ಅಮ್ಮನ ನೆನೆದಾಗಲೆಲ್ಲಾ ಅಪ್ಪನ ಪಾತ್ರ ಕೇವಲ ಸಪೋರ್ಟಿವ್ ಅಂದುಕೊಳ್ಳುತ್ತೀರಿ. ನೋ! ಅಪ್ಪ ಸಪೋರ್ಟಿವ್ ಬದಲಿಗೆ ಆತ ಮನೆಯ ಆಧಾರ. ಮೇನ್ ಪಿಲ್ಲರ್! ಅಪ್ಪನ ಮನಸ್ಸಿಲಾಗುವ ಬೆವರು, ಬೇಗುದಿ, ನಗುವುಗಳನ್ನು ಹಾಗೆಯೇ ಅದುಮಿಟ್ಟುಕೊಂಡು ಮಕ್ಕಳನ್ನು ಬೆಳೆಸುತ್ತಾನೆ. ಆತ ಮನೆಯಿಂದ ಹೊರಗೆ ಇರಬೇಕಾದ ಅನಿವಾರ್ಯತೆಯೇ ಹೆಚ್ಚು. ದೂರವಿರುವುದಕ್ಕೋ ಏನೋ ಮಕ್ಕಳೆಂದರೆ ತನ್ನ ಪ್ರಾಣವೇ ಎಂದುಕೊಂಡು ಬದುಕುತ್ತಾನೆ. ನಿಜಕ್ಕೂ ತ್ಯಾಗ ಅನ್ನುವುದಕ್ಕೆ ಭೂಮಿಯ ಮೇಲೆ ಯಾವುದಾದರೂ ಒಂದು ಉತ್ತಮ ಉದಾಹರಣೆ ಇದೆಯೆಂದರೆ ಅದು ಅಪ್ಪ ಮಾತ್ರ. ಅದು ಯಾರ ಅರಿವಿಗೂ ಬರದಂತೆ ಆತ ನಡೆದುಕೊಳ್ಳುತ್ತಾನೆ. ಯಾರಿಗೂ ತೋರಿಸಿಕೊಳ್ಳದವ ಆತ. ಮಕ್ಕಳಿಗೆ ಅಂತ ಒಂದು ಬದುಕು ಕಟ್ಟುವವರೆಗೂ ಒಂದು ನಿದ್ದೆ ಮಾಡಲಾರ. ತನ್ನೆಲ್ಲಾ ಆಸೆಗಳನ್ನು ಹನಿ ಹನಿಯಾಗಿ ನಿಮ್ಮ ಮೇಲೆ ಸುರಿಯುತ್ತಾನೆ. ನಿಮ್ಮಗಳ ಅಸೆಗೆ ಕಿವಿಯಾಗುತ್ತಾನೆ. ನಿಮಗೆ ಬೇಕು ಅಂದಿದ್ದು ಒಂಚೂರು ಕುಂದಿಲ್ಲದೇ ಎತ್ತಿಕೊಂಡು ತಂದಿಡುತ್ತಾನೆ.
ನಾವು ಹಾಗೇನೆ! ಅದರಲ್ಲೇನಿದೆ? ಎಲ್ಲರೂ ಮಾಡುವ ಹಾಗೆ ನೀವು ಮಾಡಿದ್ದೀರಿ ಅಂದು ಬಿಡುತ್ತೇವೆ. ನೋ ಅದು ನಿಮಗೆ ಅರ್ಥವೇ ಆಗುವುದಿಲ್ಲ ನಿಮ್ಮ ಮಗ ನಿಮಗೆ ಹಾಗೆ ಅನ್ನುವವರೆಗೂ! ಮಕ್ಕಳು ಅನ್ನಿಸಿಕೊಂಡವರು ಯಾವತ್ತೂ ನೆನಪಿಡಬೇಕಾಗಿರುವುದು ಇದು. ಒಂದು ಗಂಡು ಹೆಣ್ಣಿನ ಯಾವುದೋ ಆಸೆಗೆ ನಾವು ಹುಟ್ಟಿಬಂದವರಲ್ಲ. ಹಲವು ವರ್ಷಗಳ ಪ್ರಾರ್ಥನೆಯ, ಕನಸಿನ, ಅವರ ಮುಂದುವರೆದ ಭಾಗದಂಥಹ ನೀಟಾಗಿ ಎತ್ತಿಟ್ಟುಕೊಂಡ ಅವರ ಭವಿತವ್ಯಗಳು ನಾವು. ನಾವು ಯಾವತ್ತೂ ಆ ಬಗ್ಗೆ ಯೋಚಿಸುವುದೇ ಇಲ್ಲ. ಇದೊಂದು ದುರ್ದೈವವೇ ಸರಿ!

ಕಾಮೆಂಟ್‌ಗಳು

  1. ಎಂತಹ ಅರ್ಥಪೂರ್ಣ ಲೇಖನ.....!
    ಎಲ್ಲರೂ ಮೆಚ್ಚಲೇಬೇಕಾದ ಲೇಖನ.

    ಪ್ರತ್ಯುತ್ತರಅಳಿಸಿ
  2. ಎಂತಹ ಅರ್ಥಪೂರ್ಣ ಲೇಖನ.....!
    ಎಲ್ಲರೂ ಮೆಚ್ಚಲೇಬೇಕಾದ ಲೇಖನ.

    ಪ್ರತ್ಯುತ್ತರಅಳಿಸಿ
  3. ತುಂಬಾ ಚೆನ್ನಾಗಿ ಬರೆದಿದ್ದೀರಿ. ಅಭಿನಂದನೆಗಳು ಸರ್!

    ಪ್ರತ್ಯುತ್ತರಅಳಿಸಿ
  4. ಎಂತಹ ಅರ್ಥಪೂರ್ಣ ಲೇಖನ.....!
    ಎಲ್ಲರೂ ಮೆಚ್ಚಲೇಬೇಕಾದ ಲೇಖನ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹೊಸ್ತಿಲಾಚೆಯ ಬೆತ್ತಲೆ 05

ಹೊಟ್ಟೆಯಲ್ಲಿ ಮಗುವಿಟ್ಟುಕೊಂಡು ಇಟ್ಟಿಗೆ ಹೊತ್ತಳು!