ಪೋಸ್ಟ್‌ಗಳು

ಜುಲೈ, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹೊಸ್ತಿಲಾಚೆಯ ಬೆತ್ತಲೆ 05

ಇಮೇಜ್
ಈ ಜಗತ್ತನ್ನು ನೀಡಿ ಹೊಟ್ಟೆಕಿಚ್ಚಾಗುತ್ತೆ ಸರ್!  ಸರ್ ನಾವು ಹೆಣ್ಣಾಗಿರುವ ತಪ್ಪಿಗೆ ಆಳ್ತಿವಾ? ನಾವು ಹೆಣ್ಣುಗಳು ಅಂತ ಮತ್ತೆ ಮತ್ತೆ ಅಳುಸ್ತಾನಾ ಆ ದೇವ್ರು ಗೊತ್ತಿಲ್ಲ. ಆದರೆ ಅದನ್ನು ಮೀರಿ ಕಣ್ಣೀರು ನಂಗೆ ಹ್ಯಾಬಿನೇ ಆಗಿಬಿಟ್ಟಿದೆ. ಬಲು ಬೇಗ ಬುದ್ದಿ ಬಂದು ಬಿಡಬಾರದು ಸರ್. ಏನೋ ಗೊತ್ತಿಲ್ಲ ನನ್ನ ತಂದೆ ತನ್ನ ಬುದ್ದಿನ ನನ್ನ ಕೈಯಲ್ಲಿಟ್ಟು ಹೊರಟು ಹೋದ್ರು ಅನಿಸುತ್ತೆ. ನಿತ್ಯ ಮಲಗುವಾಗ ಬದುಕಿಗೆ ನಾ ಸೋತೆ ಅಂತ ಹೇಳಿಕೊಂಡು ಮಲಗ್ತಿನಿ ; ಕೇಳಿಸಿಕೊಂಡ ಬದುಕಿಗೆ ಕರುಣೆ ಬಂದು ನಾಳೆಯಾದರೂ ನನ್ನ ಗೆಲ್ಲಿಸಲಿ ಅಂತ. ಇಲ್ಲ ಸರ್ ಯಾವತ್ತೂ ಗೆಲ್ಲಲ್ಲ ನಾನು. ನನ್ನ ವಯಸ್ಸಿನ ಹುಡುಗಿಯರು ಅದೆಷ್ಟು ಖುಷಿಯಾಗಿ ಲೈಫ್ನ ಸುಂದರವಾಗಿ ಕಳಿತಾರೆ. ಬಾಯ್ ಪ್ರೆಂಡ್, ಸಿನೆಮಾ, ಸಾಕುಯೆನಿಸುವವರೆಗೂ ಓದು, ಇಷ್ಟಪಟ್ಟ ಬಟ್ಟೆ ಎಲ್ಲವೂ ಸಿಗುತ್ತೆ. ಈ ಜಗತ್ತನ್ನು ಕಂಡು ಹೊಟ್ಟೆಕಿಚ್ಚಾಗುತ್ತೆ ಸರ್. ಅವರಿಗೆ ಇಷ್ಟವಾದಾಗ ಮದುವೆಯಂತದ್ದು ಮಾಡಿಕೊಂಡು ಲೈಫ್ನಲ್ಲಿ ಸೆಟ್ಲು ಕೂಡ  ಆಗಿ ಬಿಡ್ತಾರೆ.  ಆದರೆ ನಂಗೆ ಯಾಕೆ ಸರ್ ಹೀಗೆ? ಅಪ್ಪ ನನ್ನ ಬಿಟ್ಟು ಹೋದಾಗ ನನಗೆ ಹದಿನೆಂಟು. ಮಧ್ಯ ವಯಸ್ಸು ದಾಟಿದ ಅಮ್ಮ. ಬೆಂಗಳೂರು ಸೇರಿಕೊಂಡು ವರ್ಷವಾದರೂ ನೆನಪು ಮಾಡಿಕೊಳ್ಳದ ಅಣ್ಣ, ಉಳಿದಿರುವ ಹಳೆಯ ಸಾಲ. ಒಂಚೂರು ಚಂದ ಇದೀನಿ ಅನ್ನೋ ಕಾರಣಕ್ಕೆ ಒಂಟಿಯನ್ನೊ‌ ಕಾರಣಕ್ಕೆ ಎನ್ ಕ್ಯಾಶ್ ಗೆ ಕಾಯೋ ಗಂಡಸರು. ಸಾಸಿವೆ ಜೀರಿಗೆಯಿಂದ ಹಿಡಿದು ಕಿತ್ತು ಹೋದ

ನಿಮಗೇನು ಬೇಕೆಂದು ಅರಿಯದಷ್ಟು ದಡ್ಡನೇ ಸೃಷ್ಟಿಕರ್ತನು!

ಇಮೇಜ್
ಅರ್ಥವಿಲ್ಲದ ಪ್ರಾರ್ಥನೆಯ ಬಗ್ಗೆ ಒಂದು ಜಿಜ್ಞಾಸೆ ಅಷ್ಟೇ ಇಲ್ಲಿ! ನನ್ನ ಒಟ್ಟು ವಿಷಯ ಪ್ರಾರ್ಥನೆಯ ಬಗೆಗೆ ಅಷ್ಟೇ. ಅನೇಕ ಮಂದಿ ದೇವರೊಂದಿಗೆ ವೈಯಕ್ತಿವಾಗಿ ಜಗಳಕ್ಕಿಳಿದವರಂತೆ ಪರಿ ಪರಿಯಾಗಿ ಜೋರು ದನಿಯಲ್ಲಿ ಆತನೊಂದಿಗೆ ಮಾತಿಗಿಳಿದು ಬಿಡುತ್ತಾರೆ. ಇನ್ನು ಕೆಲವರು ಭಕ್ತಿಯ ಹಾಡಿನಿಂದ, ಕುಣಿತಗಳಿಂದ ದೇವರನ್ನು ಸಂತುಷ್ಟಗೊಳಿಸುವ ಹುನ್ನಾರು ಹೂಡಿರುತ್ತಾರೆ. ಇನ್ನೂ ಕೆಲವರು ಬೇಡವುದು ಅಷ್ಟೇ ಅಲ್ಲದೇ ಬಗಬಗೆಯ ಕಾಣಿಕೆಗಳೊಂದಿಗೆ ಮೇಲ್ಮನವಿಯನ್ನು ಸಲ್ಲಿಸುತ್ತಾರೆ. ಮತ್ತೇ ಕೆಲವರು ಧ್ವನಿವರ್ಧಕದಲ್ಲಿ ಊರಲ್ಲಿರುವವರ ಪರವಾಗಿ ಪ್ರಾರ್ಥನೆಗೆ ನಿಂತುಬಿಟ್ಟಿದ್ದೇವೆ ಅನ್ನುವ ಮಟ್ಟಿನ ರೇಜಿಗೆ ಒಳಗಾಗುತ್ತಾರೆ. ಇವೆಲ್ಲವೂ ನಾನು ಕಂಡು, ನೀವು ಕೂಡ ಕಂಡಿರುವ ಪ್ರಾರ್ಥನೆಯ ಹಲವು ಮುಖಗಳು. ಇಲ್ಲಿ ಪ್ರಾರ್ಥನೆಯನ್ನು ಅಲ್ಲಗಳೆಯುವ, ಮೂದಲಿಸುವ ಇರ್ಯಾದೆ ಖಂಡಿತ ನನ್ನದಲ್ಲ. ಪ್ರಾರ್ಥನೆಯ ಒಂದು ಜಿಜ್ಞಾಸೆ ಅಷ್ಟೇ! ಪ್ರಾರ್ಥನೆ ಮೂಲತಃ ಸಂಸ್ಕøತ ಪದ. ಅದರ ಅರ್ಥವಿಷ್ಟೇ. ನನ್ನಗಿಂತ ದೊಡ್ಡವನನ್ನು ಅಥವಾ ದೇವರನ್ನು ಬೇಡಿಕೊಳ್ಳುವ ಪರಿ. ಬೇಡಿಕೊಳ್ಳುವುದು ಅಂದರೆ ಅರ್ಥವಾಗಿರಬೇಕು ನಿಮಗೆ. ನಮ್ಮಲ್ಲಿ ಇರದಿರುವ ಅಥವಾ ಇರುವುದಕ್ಕಿಂತ ಹೆಚ್ಚು ಕೊಡು ಅನ್ನುವುದೇ ಆಗಿದೆ. ( ಪ್ರ=ವಿಶೇಷವಾಗಿ, ಅರ್ಥ್=ಪ್ರಯೋಜನವನ್ನು ಅಪೇಕ್ಷಿಸುವುದು) ಪ್ರಾರ್ಥನೆ ಅನ್ನುವುದು ಏನಾದರೂ ಉದ್ದೇಶವಿಟ್ಟುಕೊಂಡೆ ಮಾಡುವುದಾಗಿದೆ. ಅಂದರೆ ಎಲ್ಲಾ ಪ್ರಾರ್ಥನೆಗಳು ಸ್ವಾ

ಆಸೆಗೆ ಆರೋಗ್ಯ ಮಾರಾಟಕಿದ್ಯಾ?

ಇಮೇಜ್
ನಮ್ಮ ಮಗುವಿಗೆ ಒಂಚೂರು ಶೀತವಾದರೆ ಸಾಕು ಹಾಸ್ಪಿಟಲ್ ಗೆ ಹೊತ್ತುಕೊಂಡು ಓಡುತ್ತೇವೆ. ಆ ಮಗುವಿನ ದೇಹದಲ್ಲಿ ರಕ್ತದ ನಾಳಗಳೇ ಸಿಗದಿದ್ದರೂ ಹಿಂಡಿ ಹಿಂಡಿ ರಕ್ತ ಎಳೆದು ಹತ್ತು ಹಲವು ಪರೀಕ್ಷೆಗಳನ್ನು ಮಾಡಿ ಊಟಕ್ಕಿಂತ ಜಾಸ್ತಿಯೇ ಅನಿಸುವಷ್ಟು ಔಷಧಿ ಮಾತ್ರೆಗಳನ್ನು ಹೊತ್ತುಕೊಂಡು ಬರುತ್ತೇವೆ. ಮಕ್ಕಳೇ ಆಗಿರಬಹುದು, ದೊಡ್ಡವರೇ ಆಗಿರಬಹುದು ಇಂದು ಆರೋಗ್ಯವೆಂದರೆ ಅದು ಬಹುಪಾಲು ಆಸ್ಪತ್ರೆ, ಮಾತ್ರೆ, ಔಷಧಿಯೇ ಆಗಿದೆ.‌ ಒಂದು ಸಣ್ಣ ತಲೆನೋವು ಕೂಡ ಒಂದೆರಡು ಮಾತ್ರೆಗಳನ್ನು ಬಯಸುತ್ತದೆ.  ಬಹುಶಃ ಇಂದಿನ ಜನರೇಷನ್ ಗೆ ಗೊತ್ತಿಲ್ಲ ಅಂದುಕೊಳ್ಳುತ್ತೇನೆ. ನಾನು ಕೂಡ ಸೇರಿದಂತೆ ಆಗಿನ‌ ಕಾಲದಲ್ಲಿ ಈ ಶೀತ, ಕೆಮ್ಮು, ತಲೆನೋವುಗಳಿಗೆ ಯಾರೂ ತಲೆಕೆಡಿಸಿಕೊಂಡಿದ್ದು ನೆನಪಿಲ್ಲ. ಒಂದು ಕಪ್ ಶುಂಠಿ ಕಷಾಯ ಸಾಕು ಎಲ್ಲವನ್ನೂ ಸರಿಯಾಗಿಸುತ್ತದೆ ಅಂದುಕೊಂಡಿದ್ದರು. ಎಷ್ಟೋ ಬಾರಿ ಆಡುವಾಗ, ಓಡುವಾಗ ಬಿದ್ದು ತಲೆ ತೂತು ಬಿದ್ದರೆ ರಕ್ತ ಹರಿದು ಬಟ್ಟೆಯಲ್ಲಾ ಕೆಂಪಾಗಿದ್ದರೂ ತಲೆಗೆ ಕಾಫಿ ಪುಡಿ ತುರುಕಿ ರಕ್ತ ನಿಲ್ಲಿಸಿ ಏನೂ ಹಾಗೆಯೇ ಇಲ್ಲ ಅನ್ನುವ ರೀತಿ ಇರುತ್ತಿದ್ದರು. ಎರಡು ಮೂರು ದಿನಕ್ಕೆ ಆ ಗಾಯವೂ ಆ ನೋವು ಕೂಡ ಮರೆತು ಹೋಗುತ್ತಿತ್ತು. ಅವರಿಗೆ ಆರೋಗ್ಯದ ಬಗ್ಗೆ ಗಂಟೆಗಟ್ಟಲೇ ಭಾಷಣವಾಗಲಿ, ಪುಟಗಟ್ಟಲೇ ವಿವರಣೆಯಾಗಲಿ ಯಾರೂ ಕೊಡುತ್ತಿರಲಿಲ್ಲ. ಅವರಿಗೆ ಬೇಕು ಕೂಡ ಆಗಿರಲಿಲ್ಲ. ಆದರೂ ಅವರು ಅದೆಷ್ಟು ಬಲಿಷ್ಢವಾಗಿ ಆರೋಗ್ಯಯುತವಾಗಿ ಬದುಕುತ್ತಿದ್ದರ