ಪೋಸ್ಟ್‌ಗಳು

ಆಗಸ್ಟ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅವ್ನನೆಲ್ಲಿ ಹೋಗ್ತಾನೆ, ಅಲ್ಲಿ ಗಣಪತಿ ಮಾಡೊ ಹತ್ರ ಇರ್ತಾನೆ!

ಇಮೇಜ್
ಆಗಾಗ ಬಾಲ್ಯ ಕಳ್ಳನಂತೆ ಕದ್ದು ನೋಡುತ್ತದೆಯಾದರೂ ಭೂಮಿಗೆ ಗಣೇಶ ಬರುತ್ತಾನೆ ಅನ್ನೊ ಈ ದಿನ ಈ ಗಣೇಶ ಬದಲೂ ಬಾಲ್ಯದ ಗಣೇಶನೇ ನನ್ನನ್ನು ನಡೆಸಿದಂತಿದೆ! ಇಲ್ಲಿ ಬಾಲ್ಯ ಬರೀ ಇಣುಕುವುದಿಲ್ಲ ಬದಲಿಗೆ ಆವರಿಸಿಕೊಳ್ಳುತ್ತದೆ. ಆರ್ಕೇಸ್ಟ್ರಾ, ಕುಣಿತ, ಚಂದಾ, ಕೋಮುಗಲಾಭೆ, ಅದ್ದೂರಿತನ ಯಾವುದೂ ನನಗೆ ಅರಿವಾಗದಷ್ಟು ಬಾಲ್ಯ ತುಂಬಿಕೊಳ್ಳುತ್ತದೆ. ಯಾರ್ಯಾರ ಪಾಲಿಗೆ ಗಣೇಶ ಏನಾಗಿ ಬರುತ್ತಾನೋ ನಾ ಅರಿಯೇ! ನನ್ನ ಪಾಲಿಗೆ ಗಣೇಶ ಬಾಲ್ಯದ ಐಕಾನ್. ಪ್ರತಿ ವರ್ಷ ನಾನು ಈ ದಿನವನ್ನು ಇಷ್ಟಪಡಲಿಕೆ ಇದೊಂದೇ ಕಾರಣ ನನಗೆ.  ಬಾಲ್ಯ ವೆಂದರೆ ಬಾಲ್ಯವೇ! ಅದು ಅಂದಿನ ಬಾಲ್ಯ. ಈಗಿನಂತೆ ಮೊಬೈಲ್ ಗೇಮ್, ಬರೀ ಹೋಂ ವರ್ಕ್ ಮಾಡುವಷ್ಟು ಆ ಬಾಲ್ಯ ಕೆಟ್ಟು ಹೋಗಿರಲಿಲ್ಲ. ಶಾಲೆಯ ಗಂಟೆ ಬಾರಿಸಿದಷ್ಟೇ ಸಾಕು ನಮಗೆ ಉಸೇನ್ ಬೋಲ್ಟ್ ನಾಚುವಂತೆ ಮತ್ತು ಶಾಲೆಯೇ ನಮ್ಮನ್ನು ಹಿಡಿಯಲು ಅಟ್ಟಿಸಿಕೊಂಡು ಬೆನ್ನತ್ತಿ ಬಂದಿದೆಯೇನೊ ಎನ್ನುವಂತೆ ಓಟ ಕೀಳುತ್ತಿದ್ದೇವು. ಮನೆಯ ಹೊರಗೆ ನಿಂತು ಪಾಟಿಗಂಟನ್ನು ಮನೆಯೊಳಗೆ ಎಸೆದು ಕಮ್ಮಾರ ಮನೆ ಮುಂದೆ ಹಾಜರ್! ನಾವು ಹೋದ ತಕ್ಷಣ ಅವರು ತಲೆನೋವೇ  ಬಂತೇನೊ ಅನ್ನುವಂತೆ ಕೋಪಿಸಿಕೊಳ್ಳುತ್ತಿದ್ದರು. ಅವರು ಕೆರೆಯಿಂದ ಮಣ್ಣು ತಂದು ಕೊನೆಯಲ್ಲಿ ಗಣೇಶನನ್ನು ಗಿರಾಕಿಗಳ ಕೈಗೆ ನೀಡುವವರೆಗಿನ ಪ್ರತಿದಿನದ ಹಾಜರಿ ಅಲ್ಲಿ ನಮ್ಮದು.  ಅದು ನಮ್ಮೂರ ಕಮ್ಮಾರ ಮನೆ. ಗಣಪತಿ ಮಾಡುವ ನಮ್ಮೂರಿನ ಏಕೈಕ ಮನೆ. ಒಂದು ತಿಂಗಳು ಮೊದ

ಕೆಂಪು ಪೆಪ್ಪರಮೆಂಟು ; ಬಾವುಟದ ನಂಟು!

ಇಮೇಜ್
ಹದಿನೈದು ಎಂಬುದರ ನೆಪದಲ್ಲಿ.... ಹೊರಗೆ ಹನಿ ಮಳೆ, ಅಮ್ಮ ಗದರಿದಕ್ಕಷ್ಟೆ ರಚ್ಚೆ ಹಿಡಿದು ಅತ್ತು ಕೊನೆಯಲ್ಲಿ ಉಳಿಯುವ ಹನುಕಲು ಕಣ್ಣೀರು ಎಳೆ ನಯನಗಳಲ್ಲಿ ಜಿನುಗುವಂತೆ!. ತಣ್ಣನೆ ತಂಪಿಗೆ ಸಂಪೂರ್ಣ ಮಾರಿಕೊಂಡ ಚುಮು ಚುಮು ಬೆಳಕಿನ ನಿದ್ದೆಯನ್ನು ಕೊಂಡು ಸರಾಗ ಉಸಿರಿನೊಂದಿಗೆ ಸವಿಯುತ್ತಿದ್ದೆ! ನನ್ನನ್ನು ಪಕಳೆ ಮೇಲಿನ ದುಂಬಿಯ ಕಾಲ್ಗುರಿತುಗಳ ಕಲೆಯನ್ನು ಮೃದುವಾಗಿ ತಡವುವಂತೆ ಕೆನ್ನ ಕೆನ್ನೆಗೆ ತಟ್ಟಿ ಅದೆಷ್ಟು ಬಾರಿ ಕಂದ ಕಂದ ಅಂದಿದ್ದಳೋ! ನಾನೇ ಎದ್ದು ಬಿಡಲಿ, ಯಾರೇ ಎಬ್ಬಿಸಲಿ, ಅವ್ವನೇ ಎಬ್ಬಿಸಲಿ ಕಡ್ಡಾಯ ನಿಯಮದಂತೆ ಅಳು ನನ್ನದು. ಅವ್ವನಿಗೆ ನನ್ನದು ನಿತ್ಯ ಇದೇ ಚಾಕರಿ. ತಾಯಿಗೆ ಆನಂದ ಪಡಲಿಕ್ಕೆ ಮತ್ತೊಂದು ಕಾರಣ. ಮಗನ ಅಳುವನ್ನು ಕಾಡಿಸಿ, ಮುದ್ದಿಸಿ, ಸಮಾಧಾನಿಸಿ, ಮನ್ನಿಸಿ, ನಗಿಸಿ ಗೆಲ್ಲುತ್ತಾಳೆ. ಆಗ ತಾನೇ ಹಿತ್ತಲ ಬೇಲೆಯಲ್ಲಿ ಅರಳಿದ ಹೂವನ್ನು ಕಿತ್ತುಕೊಟ್ಟು, ಹನಿಯುವ ಮಳೆಗೆ ಬೊಗಸೆಯಾಗುವಂತೆ ಕೈ ನೀಡಿಸಿ ಅಳು ಮರೆಸುತ್ತಿದ್ದಳು. ಅಂದು ಅಳುವಿನಲ್ಲೇ ಬಿಸಿ ನೀರಿನಲ್ಲಿ ಮಿಂದಿಸಿದ್ದಳು. ಅದೇನು ಆತುರವಿತ್ತೋ! ತಂಪಿಗೆ ವಿರುದ್ದವಾಗಿ ಹೋರಾಟಕ್ಕೆ ಬಿದ್ದಂತೆ ನನ್ನ ಮೈಯಿಂದ ಹೊಗೆ ಬರುತ್ತಿತ್ತು. ಒಂದು ಟವಲಷ್ಟೇ ಸುತ್ತಿಸಿ ‘ಜಿಜ್ಜಿಗೆ ಕೈ ಮುಗಿಯೋ ಕಂದ...!’ ಅವಳೇ ನನ್ನ ಕೈಗಳನ್ನು ಹಿಡಿದು ನಮಸ್ಕಾರ ಮಾಡಿಸಿದ್ದಳು. ಬಟ್ಟೆಯೇ ಬೇಡವಾಗದಷ್ಟು ಸ್ವಾರ್ಥಹೀನ ನಿಜ ಮನುಷ್ಯತ್ವದ ವಯಸ್ಸದು! ಅವ್ವ ಬಿಳಿ ಜಡ್ಡಿ, ಬಿಳಿ ಅ

ಹೊಟ್ಟೆಯಲ್ಲಿ ಮಗುವಿಟ್ಟುಕೊಂಡು ಇಟ್ಟಿಗೆ ಹೊತ್ತಳು!

ಇಮೇಜ್
ಹೊಸ್ತಿಲಾಚೆ ಬೆತ್ತಲೆ  08 ಬಹುಶಃ ಅವರ ಅಪ್ಪ ಅನ್ನೊನು ಅವನ ಪಾಲಿಗೆ ಎಂದೋ ಇಲ್ಲದಾಗಿದ್ದರೆ ಹಳ್ಳಿಯಲ್ಲಿ ಒಂದೊತ್ತು ಗಂಜಿಯೊಂದಿಗೆ ದಿನಗಳನಾದರೂ ತಳ್ಳುತ್ತಿದ್ದನೊ ಏನೊ! ಅವ್ವ  ಸತ್ತು ಹೋಗಿದ್ದು ನೆನಪಿಲ್ಲ. ಅವತ್ತಿಂದಲೇ ಅಥವಾ ಅದಕ್ಕಿಂತ ಮೊದಲೇ ಆತ ಕುಡಿಯಲು ಆರಂಭಿಸಿದ್ದ. ಅದೂ ಅಂತಿಂಥ ಕುಡಿತವಲ್ಲ. ಮಗನನ್ನು ಸ್ಕೂಲ್‍ನಿಂದ ಎಳೆತಂದು ಗಾರೆಯ ಕೆಲಸಕ್ಕೆ ಬಿಸಾಕಿ ಬಂದ ಹಣದಲ್ಲೂ ಕುಡಿದು ತೂರಾಡಿದ್ದ. ಇರುವ ಒಂದು ಸಣ್ಣ ಮನೆಯೂ ದೊಡ್ಡಪ್ಪ ಅನ್ನುವವನ ಪಾಲಾಗಿತ್ತು. ಬದುಕು ಆರಂಭವಾಗುವ ಮೊದಲೇ ಮುಗಿದು ಹೋಗಿತ್ತು. ಸಾಲದಕ್ಕೆ ಮೀಸೆ ಮೂಡಿದ್ದೊಂದೇ ನೆಪ ಮಾಡಿಕೊಂಡು ಅವನಿಗೊಂದು ಮದುವೆ ಮಾಡಿ ಬಿಸಾಕಿದ್ದನು ತಂದೆ! ಕುಡಿದು ಕುಡಿದು, ಕುಡಿದಿರುವ ಸ್ಥಿತಿಯಲ್ಲೇ ಆತ ಸತ್ತು ಹೋಗಿಬಿಟ್ಟ. ಕೆಲವು ತಂದೆ ತಾಯಿಗಳು ಮಕ್ಕಳಿಗೆ ಸಾಕಷ್ಟು ಆಸ್ತಿ ಮಾಡಿ ಸೋಮಾರಿಗಳನ್ನಾಗಿ ಮಾಡಿ ಹೋಗುತ್ತಾರೆ. ಕೆಲವರು ದುಡಿಯುವುದನ್ನು ಹೇಳಿಕೊಟ್ಟು ಹೋಗುತ್ತಾರೆ. ಕೆಲವರು ಎಲ್ಲಾ ಕಿತ್ತು ಬೆತ್ತಲೆ ಮಾಡಿ ನಡು ಬೀದಿಯಲ್ಲಿ ನಿಲ್ಲಿಸಿ ಹೋಗುತ್ತಾರೆ. ಮನೆಯಲ್ಲ. ಊರಲ್ಲೊಂದು ಆಶ್ರಯವಿಲ್ಲ. ಕೈಯಲ್ಲಿ ತಾನು ಕಲಿತ ಗಾರೆ ಕೆಲಸವೊಂದಿತ್ತು. ಪಕ್ಕದಲ್ಲಿ ನಂಬಿ ಬಂದ ಹೆಂಡತಿಯಿದ್ದಳು. ಕೈಲಾಗದವನಂತೆ ಹೆಂಡತಿಯನ್ನು ತವರಿಗೆ ಕಳಿಸಿ ತಾನೂ ಅಲ್ಲೇ ಹೋಗಿ ಜಾಂಡ ಊಡುವವನಲ್ಲ ಈತ. ಅವಳಿಗಾಗಿಯಾದರೂ ಆತ ಒಂದು ಕಡೆ ನಿಲ್ಲಬೇಕಾಗಿತ್ತು. ಒಂಚೂರು ನೆರಳು ಬೇಕಿತ್ತು. ಯಾ

ನಾವು ಜಸ್ಟ್ ಅವರ ಕಾಮಕ್ಕೆ ಹುಟ್ಟಿದವರಲ್ಲ!

ಇಮೇಜ್
ಅವರ ಕೆನ್ನೆಗೆ ಎತ್ತಿ ಬಾರಿಸಿದಂತೆ ‘ನನ್ನ ಹುಟ್ಸು ಅಂತ ನಾ ನಿಮಗೆ ಕೇಳಿಕೊಂಡಿದ್ನಾ?’ ಅಂದು ಬಿಡುತ್ತೇವೆ. how cruel we are! ಅವರ ಅಷ್ಟು ದಿನದ ಎಣಿಕೆಗಳನ್ನು, ಶ್ರಮಗಳನ್ನು ಜಸ್ಟ್ ಒಂದು ಮಾತಲ್ಲಿ ಜಾಡಿಸಿ ಒದ್ದಿರುತ್ತೇವೆ. ಅದು ಮನುಷ್ಯತ್ವವನ್ನು ಸಾಯಿಸಿಕೊಂಡವನ ಅಬ್ಬರ! ಇನ್ನೂ ಮುಂದುವರೆದು ‘ನನ್ನ ಹುಟ್ಟಿನಿಂದಲೇ ನೀವು ತಂದೆ, ತಾಯಿ ಅನ್ನಿಸಿಕೊಂಡಿರಿ’ ಅನ್ನುತ್ತಾನೆ. ಒಂದಲ್ಲ ಒಂದ್ಸರಿ, ಮಕ್ಕಳು ಅನ್ನಿಸಿಕೊಂಡವರು ತಂದೆ ತಾಯಿಗಳ ಮೇಲೆ ಈ ಪರಿ ಎಗರಿಬಿಟ್ಟಿರುತ್ತಾರೆ. ಯಾಕೋ ಗೊತ್ತಿಲ್ಲ ಒಂದು ಹಂತದಲ್ಲಿ ಮಕ್ಕಳು ಮತ್ತು ತಂದೆ ತಾಯಿಗಳ ಮಧ್ಯೆ ಈ ತರಹದೊಂದು ಮಾತುಕತೆ ನಡೆದಿರುತ್ತದೆ. ಹಿಂದು ಮುಂದಾದ ಪೀಳಿಗೆ, ಅಭಿರುಚಿಗಳು, ಮಗು ಸಾಗುವ ದಾರಿ, ತಂದೆ ತಾಯಿಗಳ ಒಂದಿಷ್ಟು ಬಿಗಿ ಹಿಡಿತ ಎಲ್ಲವೂ ಸೇರಿ ಈ ಮಟ್ಟಿನ ತಿರುಗು ಬೀಳುವಿಕೆ ನಡೆದಿರುತ್ತದೆ. ಮಕ್ಕಳು ಅನ್ನಿಸಿಕೊಂಡವರ ಬಳಿ ನನ್ನದೊಂದು ಮಾತಿದೆ! ನಾನೂ ಕೂಡ ಮಗನಾಗಿದ್ದವನು, ಅಪ್ಪನಾಗಿದವನು. ಎರಡೂ ಪ್ಲೇಸ್‍ಗಳಲ್ಲಿ ಕೂತು ಬದುಕು ಉಂಡುವನು. ಮಕ್ಕಳನೆಸಿಕೊಂಡ ಮಕ್ಕಳೇ ನೀವು ನಿಮ್ಮ ತಂದೆ ತಾಯಿಯರ ಕೇವಲ ಕಾಮದ ತೆವಲಿನ ಫಲ ಎಂಬುದನ್ನು ಎಂದಾದರೂ ಯೋಚಿಸಿದಿರೇನೋ!? ಒಂದು ಹುಡುಗಿ ಹೆಣ್ಣಾಗಿ ತಾಯಿಯಾಗುವ ಯಾತ್ರೆಯಲ್ಲಿನ ಅವಳೊಂದಿಗೆ ಇಂಚಿಂಚು ಚಿಗಿತುಕೊಂಡು ಬಂದಿರುವ, ಮುಂದೆ ಬರಲಿರುವ ಸಂತಾನದ ಬಗೆಗೆ ಅವಳ ಮನೋಯಾತ್ರೆಯನ್ನು ಗಮನಿಸಿಕೊಂಡಿರೇನೋ? ಅವಳ ಬದುಕಿನ ಬೃಹತ್ತಾ

ಅಮ್ಮನ ಹೆಣದ ಪಕ್ಕ ಕೂತು ಬಾಳೆ ಹಣ್ಣು ತಿಂದಿದ್ದೆ!

ಇಮೇಜ್
ಹೊಸ್ತಿಲಾಚೆ ಬೆತ್ತಲೆ  07 ಹತ್ತು ವರ್ಷಗಳಿಂದ ಊಟ ತಿಂಡಿಗಳ ಕೈಂಕರ್ಯವನ್ನು ಹೋಟೆಲ್‍ಗಳಲ್ಲೇ ಮುಗಿಸುತ್ತಾ ಬಂದಿರುವ ನಾನು ಹೋಟೆಲ್‍ನಲ್ಲಿ ಕೆಲಸ ಮಾಡುವ ಅದೆಷ್ಟು ಹುಡುಗರನ್ನು ನೋಡಿದ್ದೀನಿ. ಅವರ ಬಾಳನ್ನು ಹತ್ತಿರದಿಂದ ಕಂಡಿದ್ದೀನಿ. ಮನೆ ಬಿಟ್ಟು ಬಂದವರು, ತಪ್ಪಿಸಿಕೊಂಡವರು, ಕೆಲಸಕ್ಕೆಂದೆ ಎಳೆಸಿಕೊಂಡು ಬಂದವರು, ಮನೆಯಲ್ಲಿ ಊಟಕ್ಕಿಲ್ಲದೆ  ಹಸಿವಿಗೆ ಅಂತ ಬಂದವರು, ಮನೆಯಿಂದ ಓಡಿಸಿಕೊಂಡವರು, ಯಾರೂ ಇಲ್ಲದ ಪರದೇಶಿಗಳಂತವರು ಇವರು. ಇವ್ರೆಲ್ಲಾ ನಾವು ತಿಂದ ಎಂಜಲು, ಊಟದ ತಟ್ಟೆ ಲೋಟ ತೊಳೆಯುತ್ತಾರೆ. ನೀರಾಕಿ ಕೈಯಿಂದ ನೆಲ ಉಜ್ಜುತ್ತಾರೆ. ಹೋಟೆಲ್ ಯಜಮಾನನ ಏಟಿಗೆ ಬೆನ್ನು ಕೊಡುತ್ತಾರೆ. ರಾತ್ರಿ ಮೂಲೆಯಲ್ಲಿ ಈರುಳ್ಳಿ ಚೀಲವನ್ನು ಹಾಸಿಕೊಂಡು ಸೊಳ್ಳೆಗಳೊಂದಿಗೆ ಜಗಳಕ್ಕಿಳಿಯುತ್ತಾ ಬೆಳಗ್ಗೆಯಿಂದ ತುಂಬಿಕೊಂಡ ಸುಸ್ತು ಹೊದ್ದುಕೊಂಡು ಮಲಗಿಬಿಡುತ್ತಾರೆ. ಗಿರಾಕಿಗಳ ಬೈಗುಳ, ಯಜಮಾನನ ಉಗಿತ, ಸಾರ್ವಜನಿಕರ ತಿರಸ್ಕಾರದ ನೋಟ ಅವರನ್ನು ಕನಸಲ್ಲೂ ಕಾಡುತ್ತವೆ.   ಆ ಹುಡುಗರ ಬಗ್ಗೆ ನಂಗೆ ಅದೇನೋ ಕೂತೂಹಲ. ಸಮಯ ಸಿಕ್ಕಾಗ ಅವರೊಂದಿಗೆ ಮಾತಾಗುತ್ತೇನೆ. ನಗಿಸುತ್ತೇನೆ. ಒಂಚೂರು ಕಷ್ಟ ಎಂದವರಿಗೆ ಸಮಾಧಾನವಾಗುತ್ತೇನೆ. ಹೀಗೆ ಮೊನ್ನೆ ಸಿಕ್ಕ ಒಬ್ಬ ಹುಡುನ ಮಾತುಗಳು ಅಕ್ಷರಶಃ ನನ್ನನ್ನು ಬಹು ಕಾಡಿದವು. ಬದುಕು ಹೀಗೂ ಕೂಡ ಇದ್ಯಾ ಅಂತ ನನ್ನನ್ನು ನಾನು ಕೇಳಿಕೊಂಡಿ ಮತ್ತೆ ಮತ್ತೆ! ಅವನ ಮಾತುಗಳು ಹೀಗಿದ್ದವು. ‘ಅವತ್ತು ನಂಗೆ ಅದೇನು ಅಂತ

ಹೊಸ್ತಿಲಾಚೆ ಬೆತ್ತಲೆ 06

ಇಮೇಜ್
ಅವರನ್ನು ಹೊರಹಾಕಬೇಡ ಮಗಳೇ! ಮಗಳೇ,     ಈ ನಾಡಿನ ಪ್ರತಿಯೊಬ್ಬ ತಾಯಿಯರ ಪರವಾಗಿ ನಿನಗೊಂದು ಪತ್ರ ಬರೆಯುತ್ತಿದ್ದೇನೆ. ಮಗಳಾಗಿ ತಾಯಿಯಾಗಿ ಅಜ್ಜಿಯಾಗಿ ಈಗ ಈ ಅನಾಥಾಶ್ರಮದ ಬಂಧುವಾಗಿ ಉಳಿದುಕೊಂಡಿದ್ದೇನೆ. ಜೀವ ಉಳಿಸಿಕೊಂಡಿದ್ದೇನೆ. ಉಳಿಯಲೇ ಬೇಕಲ್ಲ ಮಗಳೇ!? ನೀ ಬಂದು ಮೊಮ್ಮಕ್ಕಳನ್ನು ಕರೆತಂದು‌ ಕಣ್ಣೀರು ಸುರಿಸುತ್ತೀಯಾ ನನ್ನ ಸ್ಥಿತಿಗೆ. ಅಣ್ಣನಿಗೆ ಹಿಡಿ ಶಾಪ ಹಾಕುತ್ತೀಯ. ಆದರೆ ಅದು ತರವಲ್ಲ ಮಗಳೇ ಇನ್ನೊಬ್ಬರಿಗೆ ಕೆಟ್ಟದ್ದು ಬಯಸಲು ನಾವ್ಯಾರು ಅಲ್ಲವೇ!? ಅವನು ನನ್ನ ಮಗ. ಅದೆಷ್ಟೋ ಹರಕೆಗಳ ಫಲ ಅವನು. ಅವನು ಚನ್ನಾಗಿರಬೇಕು, ಖುಷಿಯಾಗಿರಬೇಕು ಅಂತ ತಾನೇ ನಾನು ಮತ್ತು ನಿಮ್ಮ ಅಪ್ಪ ಹಗಲು ರಾತ್ರಿ‌ ದುಡಿದಿದ್ದು. ಬರೀ ಇಂಗ್ಲೀಷ್ ಲ್ಲೇ ಮುಳುಗಿಸಿದ್ದು, ದೊಡ್ಡ ದೊಡ್ಡ ಕಾಲೇಜಿನಲ್ಲಿ ಓದಿಸಿದ್ದು, ದೊಡ್ಡ ನೌಕರಿ ಹಿಡಿಯುವಂತೆ ಮಾಡಿದ್ದು. ಅವನನ್ನು ದುಡಿಯುವ, ಹಣ ಮಾಡುವ ಯಂತ್ರವಾಗಿ‌ ಮಾಡಿದ್ದು ನಾವೇ ಅಲ್ಲವೇ!? ಇಂದು ಅವನನ್ನು‌ ದೂರಿದರೆ ಫಲವೇನು!? ಮಗನನ್ನು ಬರೀ ಮಗನಂತೆ ಸಾಕಲೇ‌ ಇಲ್ಲ ಅನಿಸುತ್ತಿದೆ ಅದಕ್ಕೆಂದೇ ಅವನು ತಂದೆ ತಾಯಿಯರನ್ನು ತಂದೆ ತಾಯಿಯರಂತೆ ನೋಡಿಕೊಳ್ಳುತ್ತಿಲ್ಲವಾ!? ಗೊತ್ತಿಲ್ಲ. ಅಷ್ಟಕ್ಕೂ‌ ಗರಿಯೊಡೆದ ಪಕ್ಷಿಗೆ ಗೂಡಿನ ಹಂಗೇಕೆ ಅಲ್ಲವೇ!?  ಒಂದು ನೆನಪಿಡು ಮಗಳೇ ನಿನ್ನ ಮಕ್ಕಳನ್ನು ಕೇವಲ ಮಕ್ಕಳಂತೆ ಸಾಕು. ಅವರನ್ನು ಬೆಳೆಸುವ ಭರದಲ್ಲಿ‌ ನೀನು ನಿನ್ನ ಗಂಡ ಕಳೆದುಹೋಗಬೇಡಿ.  ಇನ್ನೊಂದು ಮ

ಸ್ವಾರ್ಥಿಯಾಗದ ಹೊರೆತು ನೀ ಏನನ್ನೂ ಕೂಡ ಕೊಡಲಾರೆ!

ಇಮೇಜ್
ಇದ್ಯಾವುದೋ ಹೊಸ ವರಸೆ ಎಂದು ಬೆಚ್ಚಿದಿರೇನು? ಹೌದು! ನಾನು ಹೇಳುವುದು ದಿಟ. ನಾವು ಸ್ವಾರ್ಥಿಗಳಾಗಬೇಕು, ನೀವೂ ಸ್ವಾರ್ಥಿಗಳಾಗಬೇಕು. ನಾವು ನೀವೆಲ್ಲಾ ಸ್ವಾರ್ಥಿಗಳಾಗದ ಹೊರೆತು ನಾವು ಬೇರೆಯವರಿಗೆ ಏನೂ ಕೂಡ ಕೊಡಲಾರೆವು. ನಾವು ಇದುವರೆಗೆ ಕೇಳಿಸಿಕೊಂಡಿದ್ದು, ಸಲಹೆÀ ನೀಡಿದ್ದು ‘ನಿಸ್ವಾರ್ಥಿಗಳಗಿ. ಪರರಿಗೆ ಮಿಡಿಯಿರಿ’ ಅಂದಲ್ಲವೇ!? ಒಂದು ನೆನಪಿಡಿ ಪರರಿಗಾಗಿ ಮಿಡಿಯಲು  ನಮ್ಮಲ್ಲೊಂದು ಚಿಕ್ಕ ತಂತಿಯಾದರೂ ಇರಬೇಕಲ್ಲವೇ? ಇರವ ತಂತಿಯಾದರೂ ಕಡಿದು ಹೋಗದಂತೆ ನೋಡಿಕೊಳ್ಳಬೇಕಲ್ಲವೇ? ಸ್ವಲ್ಪ ಮಟ್ಟಿಗೆ ಸ್ವಾರ್ಥ ಮತ್ತು ನಿಸ್ವಾರ್ಥದ ಕಲ್ಪನೆಗಳನ್ನು ನಮ್ಮ ಸಂಕುಚಿತ ವ್ಯಾಪ್ತಿಯಿಂದ ಆಚೆ ಕಳುಹಿಸಿ ದೂರದಿಂದ ನೋಡಿ, ಹೊರಗಿನಿಂದ ನೋಡಿ. ಸ್ವಾರ್ಥಿಯಾಗುವುದರ ಬಗ್ಗೆ ಹೇಳುತ್ತೇನೆ. ಯಾವುದು ಸ್ವಾರ್ಥ? ಅದಾಗುವುದು ಹೇಗೆ?ನಮಗೆ ನಮ್ಮ ಇರುವಿಕೆಯನ್ನು ಆನಂದಿಸುವುದು ಗೊತ್ತಿಲ್ಲ. ಪರಿಸರದೊಂದಿಗೆ ಬೆರೆತು ಹೋಗುವುದು ಗೊತ್ತಿಲ್ಲ. ನಮ್ಮೊಳಗೆ ನಮ್ಮನ್ನು ನಾವು ಹುಡುಕಿಕೊಳ್ಳುವುದು ಗೊತ್ತಿಲ್ಲ. ಸರಿಯಾಗಿ ಧ್ಯಾನಿಸುವುದು ಗೊತ್ತಿಲ್ಲ. ಅವು ಗೊತ್ತಿಲ್ಲದ ಆ ವಿಷಯಗಳಲ್ಲಿ ನಾವು ಇನ್ನೇನು ಪರರಿಗೆ ನೀಡಲು ಸಾಧ್ಯ? ಪರಿಸರದಲ್ಲಿ ಖುಷಿಯಿದೆ ಎಂದು ಹೇಗೆ ಹೇಳಬಲ್ಲರಿ, ಧ್ಯಾನದೊಳಗೆ ಖುಷಿಯಿದೆ ಹೇಗೆ ಹೇಳಬಲ್ಲರಿ, ನಮ್ಮೊಳಗೆ ನಾವು ಹೋದಾಗ ಸಿಗುವ ಒಂದು ದಿವ್ಯ ಆನಂದವನ್ನು ಅನುಭವಿಸದೇ ಬೇರೆವರಿಗೆ ಹೇಗೆ ಹೇಳಬಲ್ಲರಿ, ಮೊದಲು ನೀವು ಆದನ್ನು ಅನುಭವಿಸದ ಹೊರೆ