ಸ್ವಾರ್ಥಿಯಾಗದ ಹೊರೆತು ನೀ ಏನನ್ನೂ ಕೂಡ ಕೊಡಲಾರೆ!
ಇದ್ಯಾವುದೋ ಹೊಸ ವರಸೆ ಎಂದು ಬೆಚ್ಚಿದಿರೇನು? ಹೌದು! ನಾನು ಹೇಳುವುದು ದಿಟ. ನಾವು ಸ್ವಾರ್ಥಿಗಳಾಗಬೇಕು, ನೀವೂ ಸ್ವಾರ್ಥಿಗಳಾಗಬೇಕು. ನಾವು ನೀವೆಲ್ಲಾ ಸ್ವಾರ್ಥಿಗಳಾಗದ ಹೊರೆತು ನಾವು ಬೇರೆಯವರಿಗೆ ಏನೂ ಕೂಡ ಕೊಡಲಾರೆವು. ನಾವು ಇದುವರೆಗೆ ಕೇಳಿಸಿಕೊಂಡಿದ್ದು, ಸಲಹೆÀ ನೀಡಿದ್ದು ‘ನಿಸ್ವಾರ್ಥಿಗಳಗಿ. ಪರರಿಗೆ ಮಿಡಿಯಿರಿ’ ಅಂದಲ್ಲವೇ!? ಒಂದು ನೆನಪಿಡಿ ಪರರಿಗಾಗಿ ಮಿಡಿಯಲು ನಮ್ಮಲ್ಲೊಂದು ಚಿಕ್ಕ ತಂತಿಯಾದರೂ ಇರಬೇಕಲ್ಲವೇ? ಇರವ ತಂತಿಯಾದರೂ ಕಡಿದು ಹೋಗದಂತೆ ನೋಡಿಕೊಳ್ಳಬೇಕಲ್ಲವೇ? ಸ್ವಲ್ಪ ಮಟ್ಟಿಗೆ ಸ್ವಾರ್ಥ ಮತ್ತು ನಿಸ್ವಾರ್ಥದ ಕಲ್ಪನೆಗಳನ್ನು ನಮ್ಮ ಸಂಕುಚಿತ ವ್ಯಾಪ್ತಿಯಿಂದ ಆಚೆ ಕಳುಹಿಸಿ ದೂರದಿಂದ ನೋಡಿ, ಹೊರಗಿನಿಂದ ನೋಡಿ.
ಸ್ವಾರ್ಥಿಯಾಗುವುದರ ಬಗ್ಗೆ ಹೇಳುತ್ತೇನೆ. ಯಾವುದು ಸ್ವಾರ್ಥ? ಅದಾಗುವುದು ಹೇಗೆ?ನಮಗೆ ನಮ್ಮ ಇರುವಿಕೆಯನ್ನು ಆನಂದಿಸುವುದು ಗೊತ್ತಿಲ್ಲ. ಪರಿಸರದೊಂದಿಗೆ ಬೆರೆತು ಹೋಗುವುದು ಗೊತ್ತಿಲ್ಲ. ನಮ್ಮೊಳಗೆ ನಮ್ಮನ್ನು ನಾವು ಹುಡುಕಿಕೊಳ್ಳುವುದು ಗೊತ್ತಿಲ್ಲ. ಸರಿಯಾಗಿ ಧ್ಯಾನಿಸುವುದು ಗೊತ್ತಿಲ್ಲ. ಅವು ಗೊತ್ತಿಲ್ಲದ ಆ ವಿಷಯಗಳಲ್ಲಿ ನಾವು ಇನ್ನೇನು ಪರರಿಗೆ ನೀಡಲು ಸಾಧ್ಯ? ಪರಿಸರದಲ್ಲಿ ಖುಷಿಯಿದೆ ಎಂದು ಹೇಗೆ ಹೇಳಬಲ್ಲರಿ, ಧ್ಯಾನದೊಳಗೆ ಖುಷಿಯಿದೆ ಹೇಗೆ ಹೇಳಬಲ್ಲರಿ, ನಮ್ಮೊಳಗೆ ನಾವು ಹೋದಾಗ ಸಿಗುವ ಒಂದು ದಿವ್ಯ ಆನಂದವನ್ನು ಅನುಭವಿಸದೇ ಬೇರೆವರಿಗೆ ಹೇಗೆ ಹೇಳಬಲ್ಲರಿ, ಮೊದಲು ನೀವು ಆದನ್ನು ಅನುಭವಿಸದ ಹೊರೆತು, ಅವರೆಲ್ಲರನ್ನು ತಂದು ನೀನು ಒಟ್ಟಿಗೆ ಗುಡ್ಡೆಹಾಕಿಕೊಂಡು ನಿಸ್ವಾರ್ಥತೆಯಿಂದ ಅವರೊಂದಿಗೆ ಸೇರಿಕೊಂಡು ಅದರಲ್ಲಿ ಮುಳುಗಿ ಆನಂದ ಪಡೆಯುತ್ತೇನೆ ಎಂಬುದು ಮೂರ್ಖತನವಾದೀತು! ಯಾರ ಗೊಡವೆ ಇಲ್ಲದೇ ನಮಷ್ಟಕ್ಕೆ ನಾವೇ ಮುಳುಗುವುದು ಆನಂದ. ಅದನ್ನು ನೀನು ಸ್ವಾರ್ಥಿಯಾಗಿ ಅರಿಯದ ಬದಲು, ಸಂಪಾದಿಸಿದ ಹೊರೆತು ಬೇರೆಯವರಿಗೆ ಆನಂದ ಎಂತು ನೀಡುವೆ!?
ನಾವು ಸ್ವಾರ್ಥಿಗಳಾದರೆ ಮಾತ್ರ ಇತರರಿಗೆ ಏನಾದರೂ ನೀಡಲು ಸಾಧ್ಯವಾಗುತ್ತದೆ. ನಿಮ್ಮಲ್ಲಿ ಏನೂ ಇಲ್ಲದಿದ್ದರೆ ಇತರರಿಗೆ ಏನು ತಾನೇ ನೀಡಬಲ್ಲೇ!? ಅವರಿಗೆ ಯಾವ ರೀತಿಯ ಸಹಾಯ ಮಾಡಬಲ್ಲೆ? ನಿನಗೆ ನಿನ್ನನ್ನು ಪ್ರೀತಿಸಿಕೊಳ್ಳಲು ಬಾರದ ಹೊರೆತು ಬೇರೆಯವರನ್ನು ಎಂತು ಪ್ರೀತಿಸುವೆ? ನಿನ್ನನ್ನು ನೀನು ಪ್ರೀತಿಸಿಕೊಳ್ಳುವ ಒಂದು ಸ್ವಾರ್ಥ ಬೇಕಲ್ಲವೇ ಇಲ್ಲಿ? ನಮ್ಮೊಳಗೆ ಏನೂ ಇಲ್ಲದಿದ್ದರೆ ನಾವು ಇನ್ನೊಬ್ಬರಿಗೆ ಏನು ತಾನೇ ಹಾರೈಸಬಲ್ಲವು? ಹಾರೈಕೆ ಮಾಡಬಲ್ಲವು? ಅವರಿಗೆ ಏನು ಕಾಳಜಿ ತೋರಿಸಬಲ್ಲವು? ನಮಷ್ಟಕ್ಕೆ ನಾವು ಸಂಪೂರ್ಣವಾಗದ ಹೊರೆತು ಅದರಿಂದ ನಾವು ಬೇರೆಯವರಿಗೆ ಕಿಂಚಿತ್ತು ಕೂಡ ಸಹಾಯವಾಗದು! ದೀಪ ಅರ್ಧ ಮಾತ್ರ ಉರಿಯುತ್ತದೆ ಎಂಬುದನ್ನು ಎಲ್ಲಾದರೂ ಕೇಳಿಸಿಕೊಂಡಿದಿರೇನು? ದೀಪ ತನ್ನ ಸ್ವಾರ್ಥದಲ್ಲಿ ಎಣ್ಣೆ ಬತ್ತಿ ಬಾಚಿಕೊಂಡು ಉರಿದರೆ ಮಾತ್ರ ಬೆಳಕುಕೊಡಲು ಸಾಧ್ಯವಾದೀತು. ವ್ಯಕ್ತಿತ್ವವೊಂದು ಪೂರ್ಣ ಸ್ಥಿತಿಗೆ ಬಂದ ನಂತರ ಅದು ಹಂಚಿಕೊಳ್ಳು ಅರ್ಹವಾಗುತ್ತದೆ. ಆತ ಕೊಡಲು ಯೋಗ್ಯನಾಗುತ್ತಾನೆ. ಆ ಕೊಡುವಿಕೆಗೊಂದು ಅರ್ಥ ಬರುತ್ತದೆ ಅಲ್ಲವೇ? ಸುಮ್ಮನೆ ನಾ ನೀಡಬಲ್ಲೇ ಎಂದು ನಿಂತರೆ, ಏನು ನೀಡಬಲ್ಲೇ ನೀ? ಎಲ್ಲಿಂದ ನೀಡ ಬಲ್ಲೇ ನೀ? ಕದ್ದು ನೀಡುವೆ ಏನು? ಎಲ್ಲವನ್ನೂ ಕದಿಯಲಾಗದು ಗೊತ್ತೇನು? ಮೊದಲು ಗಳಿಸಿಕೊ! ಸರೂಪದಲ್ಲೇ ಗಳಿಸಿಕೊ! ತುಂಬಿದ ನಂತರ ಹಂಚು. ಕೈತುಂಬಾ ಹಂಚು. ನಿನ್ನಲ್ಲೂ ಪೂರ್ಣತೆಯ ಖುಷಿ. ಪಡೆದುಕೊಂಡವನಲ್ಲೂ ಪೂರ್ಣತೆಯ ಖುಷಿ ಕಾಣಿಸುತ್ತದೆ. ಸ್ವಾರ್ಥಿಯಾಗದ ಹೊರೆತು ನೀ ಏನನ್ನು ಕೂಡ ಕೊಡಲಾರೆ. ಇನ್ನಾದರೂ ತಿಳಿಯಿತೆ!?

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ