ಪೋಸ್ಟ್‌ಗಳು

ಸೆಪ್ಟೆಂಬರ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಮ್ಮ ಮಾತು ಕೇಳಿಸಿಕೊಳ್ಳುವಷ್ಟು ಅವರಿಗೆಲ್ಲಿ ತಾಳ್ಮೆ?

ಇಮೇಜ್
 ಹೊಸ್ತಿಲಾಚೆ ಬೆತ್ತಲೆ - 12 ಅವಳು ಹತ್ತನೇ ಕ್ಲಾಸ್. ಇನ್ನೊಂದು ಆರು ತಿಂಗಳು ಹೀಗೆ ದಾಟಿದರೆ ಹದಿನಾರು ದಾಟುತ್ತದೆ. ಏನೂ ಆರಿಯದ ಹುಡುಗಿಯೇನಲ್ಲ! ಅವಳಿಗೊಬ್ಬ ತಮ್ಮನಿದ್ದಾನೆ. ಏಳನೇ ಕ್ಲಾಸ್. ದೊಡ್ಡದಾಗಿ ಹೆಸರು ಮಾಡಿದ ದೊಡ್ಡ ಖಾಸಗಿ ಶಾಲೆಯಲ್ಲಿ ಓದು. ದೊಡ್ಡ ಖಾಸಗಿ ಶಾಲೆಗೆ ತಿಜೋರಿಯಲ್ಲಿ ಹೆಚ್ಚು ಹಣವಿರುವವರೇ ಸೇರಿಸುವುದು. ಅವರಪ್ಪನ ಕೆಲಸ ವಕೀಲಿಕೆ. ತಾಯಿ ಸರ್ಕಾರಿ ಹೈಸ್ಕೂಲ್‍ನಲ್ಲಿ ಕನ್ನಡ ಪಾಠ ಹೇಳುತ್ತಾರೆ. ಬಂಗ್ಲೆ, ಮನೆ ಕೆಲಸ ಮಾಡಿ ಹೋಗಲಿಕ್ಕೆ ಆಳುಗಳನ್ನು ಗುರ್ತು ಮಾಡಿಕೊಂಡಿದ್ದಾರೆ. ಇಷ್ಟೆಲ್ಲಾ ನಂಗ್ಹೇಗೆ ಗೊತ್ತಾಯ್ತು ಅಂದ್ಕೊಂಡ್ರಾ!? ದಿನ ಅವರ ಮನೆ ಮುಂದೆ ಸ್ಕೂಲ್ ಬಸ್ ನಿಲ್ಲಿಸಿ ಹತ್ತಿಸಿಕೊಂಡು ಹೋಗುವವನು ನಾನೇ. ಆದ್ದರಿಂದ ನಮ್ಮ ಬಸ್‍ಗೆ ಬರುವ ಮಕ್ಕಳ ಮನೆಯ ಹಿಸ್ಟರಿ ಬಗ್ಗೆ ಒಂಚೂರು ತಿಳಿದುಕೊಂಡಿರ್ತಿನಿ. ಇದುವರೆಗೂ ಅವರ ಮನೆಯವರು ಯಾರೂ ಬಸ್ ಬಂದಾಗ ಹತ್ತಿಸಿ ಹೋಗಿದ್ದು ನಾ ಕಂಡಿಲ್ಲ. ಅಕ್ಕನೇ ತಮ್ಮನನ್ನು ಕೈ ಹಿಡಿದುಕೊಂಡು ಅವನ ಬ್ಯಾಗ್‍ನ್ನು ಇವಳೇ ಹೊತ್ತುಕೊಂಡು ಹತ್ತಿಬಿಡುತ್ತಾಳೆ. ವಿಷಯವೆಂದರೆ ಸ್ವಲ್ಪ ಅಂತರ್ಮುಖಿ ಹುಡುಗಿ. ಈ ನಡುವೆ ಸ್ವಲ್ಪ ಸೋತಂತೆ ಕಾಣುತ್ತಿದ್ದಳು. ಬಸ್ ಹತ್ತುವಾಗಲೇ ಕಣ್ಣು ತುಸು ಕೆಂಪಾಗಿ ಊದಿಕೊಂಡಿರುವಂತೆ ಕಾಣುತ್ತಿದ್ದವು. ಅವಳು ಅತ್ತಿರುವ ಕುರುಹುಗಳೇ ಅವು! ಹುಡುಗಿ ಅಳುವಂತದ್ದು ಏನಾಗುತ್ತಿದೆ? ಏನಾದರೂ ಸಮಸ್ಯೆಯಾ? ಯಾರದಾದರೂ ಕಾಟವಾ? ಎಂದು ಎಷ್ಟೋ ಬಾರಿ ನನ್ನಷ್

ಮಗನ ನೋಟ ‘ಯಾಕೆ ಬಂದೆ?’ ಅನ್ನುವ ಹಾಗಿತ್ತು!

ಇಮೇಜ್
ಹೊಸ್ತಿಲಾಚೆ ಬೆತ್ತಲೆ - 11 ನಾನು ಈ ನಡುವೆ ದಿನಾ ರಾತ್ರಿ ಒಂದು ಬಾಳೆ ತಿನ್ನುವ ಅಭ್ಯಾಸ ಮಾಡಿಕೊಂಡಿದ್ದೇನೆ. ‘ಗುಡ್ ಒಳ್ಳೆ ಅಭ್ಯಾಸ ಕಣಯ್ಯಾ!’ ಅಂದ್ಕೊಂಡ್ರಾ? ಇಲ್ಲ ಖಂಡಿತ ಇಲ್ಲ. ‘ನೋಡಿ ಇವ್ರೆ ನಿಮಗೆ ಸ್ವಲ್ಪ ಜೀರ್ಣಶಕ್ತಿಯ ಸಮಸ್ಯೆ ಇದೆ. ಡೈಲಿ ರಾತ್ರಿ ಒಂದು ಬಾಳೆ ಹಣ್ಣು ತಿನ್ನಿ’ ಅಂತ ಯಾರೊ ಡಾಕ್ಟರ್ ಹೇಳಿರಬೇಕು ಅಂದ್ಕೊಂಡ್ರಾ? ಇಲ್ಲ ಅದು ಕೂಡ ಅಲ್ಲ. ಬಾಳೆ ಹಣ್ಣು ತಿನ್ನಲೇ ಬೇಕು ಅನ್ನೋದು ನನ್ನ ಉದ್ದೇಶವಲ್ಲ. ಎಲ್ಲಾದರೂ ಪರವಾಗಿಲ್ಲ ಅಂಗಡಿಗಳು ಸಿಕ್ಕಾಗಲೆಲ್ಲಾ ತಿಂದುಬಿಡ್ತಿನಿ ಅಂತಾನೂ ಅಲ್ಲ. ನಿತ್ಯ ಆ ಅಂಗಡಿಯಲ್ಲಿಯೇ ಬಾಳೆ ಹಣ್ಣು ತಿನ್ನಬೇಕು ಅಂದ್ಕೊಂಡಿದೀನಿ ಆ ಅಂಂಗಡಿಯಲ್ಲಿಯೇ! ನನ್ನಿಂದ ಐದು ರೂಪಾಯಿ ವ್ಯಾಪಾರ ಆಗುತ್ತಲ್ಲ ಆ ಕಾರಣಕ್ಕೆ! ಅಂಗಡಿ!? ಛೇ ಹಾಗೆ ಕರೆದರೆ ಪ್ರಮಾದವಾದೀತು! ಒಂದೊಂದು ಗಾಲಿಯಲ್ಲಿ ಏಳೇಟು ಕಡ್ಡಿಗಳು. ಹಾಗೆ ಕಡ್ಡಿಗಳಿರುವ ನಾಲ್ಕು ಗಾಲಿಗಳು. ಗಾಲಿಯಲ್ಲಿ ಟೈರ್ ಇದಾವೋ ಇಲ್ಲವೋ ನಾನು ನಿಖರವಾಗಿ ಹೇಳಲಾರೆ. ದಪ್ಪದಪ್ಪನೆಯ ಏಳೆಂಟು ಕಲ್ಲುಗಳನ್ನು ತಂದು ಅದಕ್ಕೆ ಒಡ್ಡಿ ನಿಲ್ಲಿಸಲಾಗಿದೆ. ತಳ್ಳು ಗಾಡಿ ರೀ! ಆದರೆ ತಳ್ಳಲು ಬಾರದು. ಅದಕ್ಕೆಂದೆ ಫುಟ್‍ಪಾತ್ ಮೇಲೆ ಒಂದೆಡೆ ಕಲ್ಲುಗಳನ್ನು ಆನಿಸಿ ನಿಲ್ಲಿಸಲಾಗಿದೆ. ಅದರ ಮೇಲೆ ಚಿಕ್ಕ ಗುಡಿಸಲಿನಂತೆ ಹರಕು ಮುರಕು ತಗಡು, ಪ್ಲೇವುಡ್‍ಗಳಿಂದ ಅಕ್ಕ ಪಕ್ಕ ಮತ್ತು ಮೇಲಿನ ಹೊದಿಕೆ. ಒಳಗೆ ಪೆಪ್ಪರಮೆಂಟು, ಬೋಟಿ, ಚಾಕಲೇಟ್, ಅಡಿಕೆ ಪಟ್ಣ, ಸಿಗ

ಮಾದ್ರಿ

ಇಮೇಜ್
ಅವರು ಮುನಿಯಂತೆ! ಮುನಿಸಿಕೊಂಡು  ಕುಣಿದು ಕೊಟ್ಟರೇಕೆ? ಶಾಪವ  ಮುನಿತನ  ಸೋರಿ ಹೊಯಿತೆ!? ಮರ ಕೊಬ್ಬಿ  ಹೂ ಹಿಗ್ಗಿ ದುಂಬಿ ಸೆಳೆದು  ಬೀಜ ಕಟ್ಟುವುದೇ  ನಿಜ ಪ್ರಕೃತಿ; ಅದುವೆ ನ್ಯಾಯ! ನಿನ್ನ ಪ್ರಣಯಕೆ  ನೀ ಮರೆಸಿಕೊಂಡ ವೇಷ ಪಾಂಡುಗೇನು ಗೊತ್ತು? ಹೂಡಿದ ಹೊಡೆದ ‘ಸೇರಿದೊಡೆ ಸಾಯಿ’ ನೀವೇನೊ ಶಪಿಸಿದಿರಿ! ಪಾಂಡು ಉಂಡ ಅವರ ಬಾಣದ ಕರ್ಮಕೆ ನನ್ನದೇನು ತಪ್ಪು!? ಇನಿಯಗೆ  ಪ್ರಾಣ ಭಯವನ್ನಿಕ್ಕಿ ಯೌವ್ವನವ, ಸುಖವ ಬೋರಲು ಹಾಕಿದೇಕೆ? ಹೆಣ್ಣ ಗಣನೆಗೆ  ತಗೆದುಕೊಳ್ಳದ  ನಿನ್ನ ತಪಃಕೇನಿದೆ ನ್ಯಾಯದ ತೂಕ? ಒಬ್ಬರ ಕಾರಣದಿ  ಒಬ್ಬರ ಉಳಿಸಿವುದು ಬದುಕು; ಒಬ್ಬರಿಗಾಗಿ ಮತ್ತೊಬ್ಬರ  ಒಂಟಿ ಮಾಡುವುದಲ್ಲ! 

ನಮ್ಮ ಮನೆಯಲ್ಲಿ ಯಾರೋ ಹಸಿದಿದ್ದಾರೇನೊ ಅನ್ಸುತ್ತೆ ಸರ್!

ಇಮೇಜ್
ಹೊಸ್ತಿಲಾಚೆ ಬೆತ್ತಲೆ - 10 ಆಕೆಯ ಹೆಸರು ಭಾರ್ಗವಿ. ಪೇಸ್ಬುಕ್ ಲ್ಲಿ ಯಾವಾಗ ಪ್ರೆಂಡ್ ಆಗಿ ಬಿಟ್ಟಿದ್ದಳೊ ಗೊತ್ತಿಲ್ಲ! ಆದರೆ ಇಲ್ಲಿ  ವಿಷಯವೆಂದರೆ ಅವಳ ಪೋಸ್ಟಿಂಗ್ ಕುರಿತಾದದ್ದು. ಸಾಮಾನ್ಯವಾಗಿ ನಮಗೆಲ್ಲ ಒಂದು ಕ್ರೇಜ್ ಇರುತ್ತೆ. ನಮ್ಮ ಮನೆಯಲ್ಲಿ ಪ್ರೀತಿಯ ಬೆಕ್ಕು ಅಥವಾ ಚಂದದ ನಾಯಿ ಇನ್ಯಾವುದೋ ಪ್ರೀತಿಯಿಂದ ಸಾಕಿದ ಪ್ರಾಣಿಯ ಜೊತೆ ಸೆಲ್ಪಿಯೋ, ಅದರೊಂದಿಗಿನ ಒಡನಾಟದ ಫುಲ್  ಪೊಟ್ರೆಟ್ ಸೈಜಿನ ಪೋಟೊ ವನ್ನು ನಮಗೆ ಪ್ರಾಣಿಗಳ ಮೇಲೆ ಇರುವ ಪ್ರೀತಿಗಿಂತ ಎರಡುಪಟ್ಟು ತೋರ್ಪಡಿಕೆಗಾಗಿಯೇ ತೆಗೆದ ಪೇಸ್ಬುಕ್ ಗೆ ಸುರಿದು ಲೈಕ್ ಮತ್ತು ಕಾಮೆಂಟ್ ಗೆ ಕಾಯುತ್ತೇವೆ. ಆದರೆ ಆ ಹುಡುಗಿಯ ಪೋಸ್ಟಿಂಗ್ ನಾನು ತುಂಬಾ ದಿನದಿಂದ ಗಮನಿಸುತ್ತಲೇ ಇದ್ದೆ. ಆಕೆಯ ಪೋಸ್ಟಿಂಗ್ ನಲ್ಲಿ ನಾಯಿ ಕಡ್ಡಾಯವಾಗಿ ಇರುತ್ತಿತ್ತು. ಆದರೆ ಯಾವಾಗಲೂ ಅದೊಂದೇ ನಾಯಿಯಲ್ಲ. ಪ್ರತಿಸಾರಿಯೂ ಭಿನ್ನ! ಒಂದು ವಿಶೇಷವೆಂದರೆ ಅವೆಲ್ಲ ಬೀದಿನಾಯಿಗಳು ಅನಿಸುತ್ತಿತ್ತು. ಮರಿಗಳಿಂದ ಹಿಡಿದು ಮುದಿ ಹೆಣ್ಣುನಾಯಿಗಳ ವರೆಗೆ ಯಾವುದಾದರೂ ಒಂದು ಅಥವಾ ಹಲವುಗಳನ್ನು ಹಿಡುದುಕೊಂಡು ಊಟ ತಿನ್ನಿಸುತ್ತಲೋ, ಸ್ನಾನ‌ ಮಾಡಿಸುತ್ತಲೋ ಇರುವ ಫೋಟೊ ಕಾಣುತ್ತಿದ್ದೆ ನಾನು. ಇವೆಲ್ಲಕ್ಕಿಂತ ಮುಖ್ಯವಾಗಿ ಅವರನ್ನು ಸಂಪರ್ಕಿಸಿ ಮಾತನಾಡಸಬೇಕು ಅಂತ ಕುತೂಹಲ ಹುಟ್ಟುವಂತೆ ಮಾಡಿದ್ದು ಅಂದು ಅವರು ಎರಡು ನಾಯಿಮರಿಗಳೊಂದಿಗೆ  ಬರೆದುಕೊಂಡ ಒಂದು ಪೋಸ್ಟ್.                               

ಎಲ್ರಿಗೂ ಇರುವ ಅಪ್ಪ ನಂಗ್ಯಾಕಿಲ್ಲ!?

ಇಮೇಜ್
  ಹೊಸ್ತಿಲಾಚೆ ಬೆತ್ತಲೆ - 09 ಹೌದು, ಎಲ್ಲರಿಗೂ ಇರುವ ಅಪ್ಪ ನನಗೆ ಯಾಕಿಲ್ಲ!? ಮುದ್ದು ಹುಡುಗನ ಮನಸ್ಸಿನಲ್ಲಿ ಮುದ್ದು ಪ್ರಶ್ನೆ ಮೂಡಿತ್ತು. ತರಗತಿಯ ಪಾಠಗಳು, ಜೊತೆಗಿನವರ ಮಾತುಗಳು, ಅಲ್ಲಲ್ಲಿ ನೋಡುತ್ತಿದ್ದ ನೋಟಗಳು ‘ಅಪ್ಪ’ ಎನ್ನುವ ಒಂದು ಪಾತ್ರ ತನ್ನ ಜೀವನದಲ್ಲಿ ಏಕಿಲ್ಲ ಅನಿಸುವಂತೆ ಮಾಡಿತ್ತು. ಅದೇ ಮುಗ್ಧತೆಯಲ್ಲಿ ಬಂದು ಅಮ್ಮನನ್ನು ಕೇಳಿದ್ದ. ‘ಅಮ್ಮಾ, ಅಪ್ಪ ಎಲ್ಲಿ?’ ಏನು ಉತ್ತರ ಕೊಟ್ಟಾಳು!. ಉತ್ತರವೇ ಇಲ್ಲ ಅಂತಲ್ಲ. ಇಷ್ಟು ಬೇಗ ತನಗೆ ತಂದೆಯೇ ಇಲ್ಲ ಎಂಬ ಅರಿವು ಮಗನಿಗೆ ಏಕೆ ಎಂದು ಅದನ್ನು ಹಾಗೆ ಹಿಡಿದಿಟ್ಟಿದ್ದಳು. ತಾನು ಆರು ತಿಂಗಳು ಗರ್ಭಿಣಿಯಾಗಿದ್ದಾಗ ಗಂಡನಿಗೆ ಜ್ವರ ಬಂದಿದ್ದೆ ನೆಪವಾಗಿ ಹತ್ತು ಹದಿನೈದು ದಿನಗಳ ಸರ್ಕಾರಿ ಆಸ್ಪತ್ರೆಯ ವಾಸದಲ್ಲಿ ಒಂದು ದಿನ ಇದ್ದಕ್ಕಿಂದ ಹಾಗೆ ಸತ್ತು ಹೋಗಿದ್ದ. ಹೊಟ್ಟೆಯೊಳಗಿನ ಮಗು ಅನಾಥವಾಗಿತ್ತು. ತವರು ಸೇರಿ ಹಡೆದು, ಮಗುವನ್ನು ಜತನ ಮಾಡಿಕೊಂಡು ಬದುಕಿದ್ದಳು. ಅತ್ತಿಗೆಯ ಮಾತುಗಳಿಂದ ಅಲ್ಲಿಂದ ಹೊರ ಬಂದು ಸ್ವಂತಕ್ಕೆ ಬದುಕಿದ್ದಳು. ಗಂಡನ ಮನೆಯಿಂದಲೂ ಆಸ್ತಿಯ ಕಾರಣಕ್ಕೆ ತಳ್ಳÀಲ್ಪಟ್ಟಿದ್ದಳು. ಯೌವ್ವನ ಇನ್ನೂ ಹಸುರಾಗಿರುವ ಕಾರಣ ತಿನ್ನುವ ಕಣ್ಣುಗಳಿಂದ ಪಾರಾಗುವುದೇ ಸವಾಲಾಗಿತ್ತು. ಹೇಗೋ ಮಗುವನ್ನು ಚನ್ನಾಗಿ ಸಾಕುವ ಹಠಕ್ಕೆ ಬಿದ್ದು ಬದುಕಿದ್ದಳು. ಮಗು ಆಗ ತಾನೇ ಒಂದನೇ ಕ್ಲಾಸಿಗೆ ಸೇರಿತ್ತು. ಮಗ ಬಂದು ‘ಅಪ್ಪ ಎಲ್ಲಮ್ಮಾ?’ ಅಂತ ಕೇಳಿದಾಗ ಉತ್ತರ ಹೇಳಬೇಕಿ