ಮಾದ್ರಿ

ಅವರು ಮುನಿಯಂತೆ!
ಮುನಿಸಿಕೊಂಡು 
ಕುಣಿದು ಕೊಟ್ಟರೇಕೆ?
ಶಾಪವ 
ಮುನಿತನ 
ಸೋರಿ ಹೊಯಿತೆ!?


ಮರ ಕೊಬ್ಬಿ 
ಹೂ ಹಿಗ್ಗಿ
ದುಂಬಿ ಸೆಳೆದು 
ಬೀಜ ಕಟ್ಟುವುದೇ 
ನಿಜ ಪ್ರಕೃತಿ;
ಅದುವೆ ನ್ಯಾಯ!

ನಿನ್ನ ಪ್ರಣಯಕೆ 
ನೀ ಮರೆಸಿಕೊಂಡ ವೇಷ
ಪಾಂಡುಗೇನು ಗೊತ್ತು?
ಹೂಡಿದ ಹೊಡೆದ
‘ಸೇರಿದೊಡೆ ಸಾಯಿ’
ನೀವೇನೊ ಶಪಿಸಿದಿರಿ!
ಪಾಂಡು ಉಂಡ
ಅವರ ಬಾಣದ ಕರ್ಮಕೆ


ನನ್ನದೇನು ತಪ್ಪು!?
ಇನಿಯಗೆ 
ಪ್ರಾಣ ಭಯವನ್ನಿಕ್ಕಿ
ಯೌವ್ವನವ, ಸುಖವ
ಬೋರಲು ಹಾಕಿದೇಕೆ?
ಹೆಣ್ಣ ಗಣನೆಗೆ 
ತಗೆದುಕೊಳ್ಳದ 
ನಿನ್ನ ತಪಃಕೇನಿದೆ
ನ್ಯಾಯದ ತೂಕ?
ಒಬ್ಬರ ಕಾರಣದಿ 
ಒಬ್ಬರ ಉಳಿಸಿವುದು
ಬದುಕು;
ಒಬ್ಬರಿಗಾಗಿ ಮತ್ತೊಬ್ಬರ 
ಒಂಟಿ ಮಾಡುವುದಲ್ಲ! 



ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಾವು ಜಸ್ಟ್ ಅವರ ಕಾಮಕ್ಕೆ ಹುಟ್ಟಿದವರಲ್ಲ!

ಹೊಸ್ತಿಲಾಚೆಯ ಬೆತ್ತಲೆ 05

ಹೊಟ್ಟೆಯಲ್ಲಿ ಮಗುವಿಟ್ಟುಕೊಂಡು ಇಟ್ಟಿಗೆ ಹೊತ್ತಳು!