ನಮ್ಮ ಮಾತು ಕೇಳಿಸಿಕೊಳ್ಳುವಷ್ಟು ಅವರಿಗೆಲ್ಲಿ ತಾಳ್ಮೆ?
ಹೊಸ್ತಿಲಾಚೆ ಬೆತ್ತಲೆ - 12 ಅವಳು ಹತ್ತನೇ ಕ್ಲಾಸ್. ಇನ್ನೊಂದು ಆರು ತಿಂಗಳು ಹೀಗೆ ದಾಟಿದರೆ ಹದಿನಾರು ದಾಟುತ್ತದೆ. ಏನೂ ಆರಿಯದ ಹುಡುಗಿಯೇನಲ್ಲ! ಅವಳಿಗೊಬ್ಬ ತಮ್ಮನಿದ್ದಾನೆ. ಏಳನೇ ಕ್ಲಾಸ್. ದೊಡ್ಡದಾಗಿ ಹೆಸರು ಮಾಡಿದ ದೊಡ್ಡ ಖಾಸಗಿ ಶಾಲೆಯಲ್ಲಿ ಓದು. ದೊಡ್ಡ ಖಾಸಗಿ ಶಾಲೆಗೆ ತಿಜೋರಿಯಲ್ಲಿ ಹೆಚ್ಚು ಹಣವಿರುವವರೇ ಸೇರಿಸುವುದು. ಅವರಪ್ಪನ ಕೆಲಸ ವಕೀಲಿಕೆ. ತಾಯಿ ಸರ್ಕಾರಿ ಹೈಸ್ಕೂಲ್‍ನಲ್ಲಿ ಕನ್ನಡ ಪಾಠ ಹೇಳುತ್ತಾರೆ. ಬಂಗ್ಲೆ, ಮನೆ ಕೆಲಸ ಮಾಡಿ ಹೋಗಲಿಕ್ಕೆ ಆಳುಗಳನ್ನು ಗುರ್ತು ಮಾಡಿಕೊಂಡಿದ್ದಾರೆ. ಇಷ್ಟೆಲ್ಲಾ ನಂಗ್ಹೇಗೆ ಗೊತ್ತಾಯ್ತು ಅಂದ್ಕೊಂಡ್ರಾ!? ದಿನ ಅವರ ಮನೆ ಮುಂದೆ ಸ್ಕೂಲ್ ಬಸ್ ನಿಲ್ಲಿಸಿ ಹತ್ತಿಸಿಕೊಂಡು ಹೋಗುವವನು ನಾನೇ. ಆದ್ದರಿಂದ ನಮ್ಮ ಬಸ್‍ಗೆ ಬರುವ ಮಕ್ಕಳ ಮನೆಯ ಹಿಸ್ಟರಿ ಬಗ್ಗೆ ಒಂಚೂರು ತಿಳಿದುಕೊಂಡಿರ್ತಿನಿ. ಇದುವರೆಗೂ ಅವರ ಮನೆಯವರು ಯಾರೂ ಬಸ್ ಬಂದಾಗ ಹತ್ತಿಸಿ ಹೋಗಿದ್ದು ನಾ ಕಂಡಿಲ್ಲ. ಅಕ್ಕನೇ ತಮ್ಮನನ್ನು ಕೈ ಹಿಡಿದುಕೊಂಡು ಅವನ ಬ್ಯಾಗ್‍ನ್ನು ಇವಳೇ ಹೊತ್ತುಕೊಂಡು ಹತ್ತಿಬಿಡುತ್ತಾಳೆ. ವಿಷಯವೆಂದರೆ ಸ್ವಲ್ಪ ಅಂತರ್ಮುಖಿ ಹುಡುಗಿ. ಈ ನಡುವೆ ಸ್ವಲ್ಪ ಸೋತಂತೆ ಕಾಣುತ್ತಿದ್ದಳು. ಬಸ್ ಹತ್ತುವಾಗಲೇ ಕಣ್ಣು ತುಸು ಕೆಂಪಾಗಿ ಊದಿಕೊಂಡಿರುವಂತೆ ಕಾಣುತ್ತಿದ್ದವು. ಅವಳು ಅತ್ತಿರುವ ಕುರುಹುಗಳೇ ಅವು! ಹುಡುಗಿ ಅಳುವಂತದ್ದು ಏನಾಗುತ್ತಿದೆ? ಏನಾದರೂ ಸಮಸ್ಯೆಯಾ? ಯಾರದಾದರೂ ಕಾಟವಾ? ಎಂದು ಎಷ್ಟೋ ಬಾರಿ ನನ...