ಹೊಸ್ತಿಲಾಚೆಯ ಬೆತ್ತಲೆ 05
ಈ ಜಗತ್ತನ್ನು ನೀಡಿ ಹೊಟ್ಟೆಕಿಚ್ಚಾಗುತ್ತೆ ಸರ್! ಸರ್ ನಾವು ಹೆಣ್ಣಾಗಿರುವ ತಪ್ಪಿಗೆ ಆಳ್ತಿವಾ? ನಾವು ಹೆಣ್ಣುಗಳು ಅಂತ ಮತ್ತೆ ಮತ್ತೆ ಅಳುಸ್ತಾನಾ ಆ ದೇವ್ರು ಗೊತ್ತಿಲ್ಲ. ಆದರೆ ಅದನ್ನು ಮೀರಿ ಕಣ್ಣೀರು ನಂಗೆ ಹ್ಯಾಬಿನೇ ಆಗಿಬಿಟ್ಟಿದೆ. ಬಲು ಬೇಗ ಬುದ್ದಿ ಬಂದು ಬಿಡಬಾರದು ಸರ್. ಏನೋ ಗೊತ್ತಿಲ್ಲ ನನ್ನ ತಂದೆ ತನ್ನ ಬುದ್ದಿನ ನನ್ನ ಕೈಯಲ್ಲಿಟ್ಟು ಹೊರಟು ಹೋದ್ರು ಅನಿಸುತ್ತೆ. ನಿತ್ಯ ಮಲಗುವಾಗ ಬದುಕಿಗೆ ನಾ ಸೋತೆ ಅಂತ ಹೇಳಿಕೊಂಡು ಮಲಗ್ತಿನಿ ; ಕೇಳಿಸಿಕೊಂಡ ಬದುಕಿಗೆ ಕರುಣೆ ಬಂದು ನಾಳೆಯಾದರೂ ನನ್ನ ಗೆಲ್ಲಿಸಲಿ ಅಂತ. ಇಲ್ಲ ಸರ್ ಯಾವತ್ತೂ ಗೆಲ್ಲಲ್ಲ ನಾನು. ನನ್ನ ವಯಸ್ಸಿನ ಹುಡುಗಿಯರು ಅದೆಷ್ಟು ಖುಷಿಯಾಗಿ ಲೈಫ್ನ ಸುಂದರವಾಗಿ ಕಳಿತಾರೆ. ಬಾಯ್ ಪ್ರೆಂಡ್, ಸಿನೆಮಾ, ಸಾಕುಯೆನಿಸುವವರೆಗೂ ಓದು, ಇಷ್ಟಪಟ್ಟ ಬಟ್ಟೆ ಎಲ್ಲವೂ ಸಿಗುತ್ತೆ. ಈ ಜಗತ್ತನ್ನು ಕಂಡು ಹೊಟ್ಟೆಕಿಚ್ಚಾಗುತ್ತೆ ಸರ್. ಅವರಿಗೆ ಇಷ್ಟವಾದಾಗ ಮದುವೆಯಂತದ್ದು ಮಾಡಿಕೊಂಡು ಲೈಫ್ನಲ್ಲಿ ಸೆಟ್ಲು ಕೂಡ ಆಗಿ ಬಿಡ್ತಾರೆ. ಆದರೆ ನಂಗೆ ಯಾಕೆ ಸರ್ ಹೀಗೆ? ಅಪ್ಪ ನನ್ನ ಬಿಟ್ಟು ಹೋದಾಗ ನನಗೆ ಹದಿನೆಂಟು. ಮಧ್ಯ ವಯಸ್ಸು ದಾಟಿದ ಅಮ್ಮ. ಬೆಂಗಳೂರು ಸೇರಿಕೊಂಡು ವರ್ಷವಾದರೂ ನೆನಪು ಮಾಡಿಕೊಳ್ಳದ ಅಣ್ಣ, ಉಳಿದಿರುವ ಹಳೆಯ ಸಾಲ. ಒಂಚೂರು ಚಂದ ಇದೀನಿ ಅನ್ನೋ ಕಾರಣಕ್ಕೆ ಒಂಟಿಯನ್ನೊ ಕಾರಣಕ್ಕೆ ಎನ್ ಕ್ಯಾಶ್ ಗೆ ಕಾಯೋ ಗಂಡಸರು. ಸಾಸಿವೆ ಜೀರಿಗೆಯಿಂದ ಹಿಡ...